Friday, February 5, 2010

ನನ್ನೋಲುವೆ..!

ಒಲವೆ ನನ್ನೋಲುವೆ,ನಿನ್ನ ನಯನ ನೋಡಲು ನಾನು ಅದೆಸ್ಟೋ ವಸಂತಗಳಿಂದ ಕಾದಿರುವೆ..
ಕಣ್ಮುಚ್ಚದೆ ನಿನ್ನ ಕನಸ್ಸನ್ನು ಕಾಣುತ, ಈ ಲೋಕವನ್ನೇ ಮರೆತಿರುವೆ....!!

ರಭಸದ ಮಳೆಗಾಲದಲ್ಲಿಯೂ ,
ನಿನ್ನ ಹೃದಯದಲ್ಲಿ ತಂಪಾದ ಚಳಿಗಾಲ,
ನೀನ್ನ ಕಂನ್ಗಳಲಿ ಬೇಸಿಗೆಯ ಆ ಸುಡುಬಿಸಿಲು..
ನಿನ್ನ ಚೆಲುವಿನಿಂದ ಮನಸ್ಸಿಗೆ ಏನೋ ಒಂಥರಾ ಹರುಷ...!!

ನೀ ಹರಿಯುವ ನದಿಯಾದರೆ,
ಉದುರಿದ ಎಲೆಯಾಗಿ ನಿನ್ನ ಮಡಿಲಲಿ ತೇಲುವಾಸೆ,
ನಿನ್ನ ಜೊತೆ ಜೊತೆಗೆ ಪ್ರೀತಿಯ ದಡ ಸೇರುವ ಆಸೆ.
ನದಿಗೆ ಸಾಗರ್ ಸೇರುವಾಸೆ , ನನ್ನ ಹೃದಯದ ಮಧುರ ಕಲ್ಪನೆಗಳೆಲ್ಲ ನಿನ್ನ ಸೇರುವಾಸೆ...!!!!

ಹೇಳು ಚೆಲುವೆ ನಿನ್ನಾಸೆಗಳೇನು,
ಬೆಳದಿಂಗಳ ಚಂದಿರ ಬೇಕೇ,
ಮಿನುಗುವ ನಕ್ಷತ್ರ ಬೇಕೇ,
ನಿನಗಾಗಿ ನಾನೆಲ್ಲವನ್ನೂ ಮುಡುಪಾಗಿಡುವೆ
ನಿನ್ನಾಸೆಯಂತೆ ನಾ ನಡೆಯುವೆ,ನಿನಗಾಗಿ ವಿಶ್ವವನ್ನೇ ಗೆಲ್ಲುವೆ..
ನನ್ನ ಅಮೂಲ್ಯವಾದ ಪ್ರೀತಿಯನ್ನು ಉಡುಗೊರೆಯಾಗಿ ಕೊಡುವೆ..!!

1 comment:

  1. Hummm nice kane putt...
    bega angel huduko aita...ಹೇಳು ಚೆಲುವೆ ನಿನ್ನಾಸೆಗಳೇನು,
    ಬೆಳದಿಂಗಳ ಚಂದಿರ ಬೇಕೇ,
    ಮಿನುಗುವ ನಕ್ಷತ್ರ ಬೇಕೇ,
    en mahi romantic agi kelidiyaaaaaaa?nice kano
    ನನ್ನ ಹೃದಯದ ಮಧುರ ಕಲ್ಪನೆಗಳೆಲ್ಲ ನಿನ್ನ ಸೇರುವಾಸೆ...!!!!

    humm nija kano nin kanasella angel manasige seratte...wish u good luck dear...get ur sweet angel choooon

    ReplyDelete