ನಯನದಲಿ ಗರಿಗೆದರಿ
ಕುಣಿಯುವ ಕನಸುಗಳು
ಕಂದಿ ಕಮರುವ ಮುನ್ನ
ಬಂದು ಬಿಡು ಗೆಳತಿ
ಸಂಜೆಗೆಂಪಿನ ಕೆನ್ನೆಯ
ಚೆಲುವ ಕಿರು ಗುಳಿಯಲ್ಲಿ
ಸುಕ್ಕು ಮೂಡುವ ಮುನ್ನ
ಬಂದು ಬಿಡು ಗೆಳತಿ
ಹೃದಯದೊಲವಿನ ಜೋಗ
ಎದೆ ಹಸಿರ ಗಿರಿಯಿಂದ
ಬತ್ತಿ ಹೋಗುವ ಮುನ್ನ
ಬಂದು ಬಿಡು ಗೆಳತಿ
ಎದೆಯ ಅಂಗಳದಿ
ಪ್ರೀತಿ ಚಿತ್ತಾರದ ಹೂ
ಬಾಡಿ ಬೀಳುವ ಮುನ್ನ
ಬಂದು ಬಿಡು ಗೆಳತಿ.....
its really nice mahi...
ReplyDeletei liked this v. much.......
ಎದೆಯ ಅಂಗಳದಿ
ಪ್ರೀತಿ ಚಿತ್ತಾರದ ಹೂ
ಬಾಡಿ ಬೀಳುವ ಮುನ್ನ
ಬಂದು ಬಿಡು ಗೆಳತಿ.....
barde irtalenooo?
i liked this line soooo much gotta nan bekadaga idna cpoy madkotini plzzz
awesome!! really good.. liked it a lot...nice one bro.. keep them coming :)
ReplyDelete