Tuesday, July 20, 2010

ಕವನ ...!!

ಮನದಲಿ ಮೂಡಿದೆ
ಪ್ರೀತಿಯ ಭಾವನೆ
ಬರೆದೆ ಅದನ್ನ ಪದಗಳ ಸಾಲಾಗಿ
ಅದುವೇ ನನ್ನ ಕವನ..

ಕನಸಲಿ ಕಾಣಿದೆ
ಒಲವಿನ ಅಪ್ಪುಗೆ
ಬರೆದೆ ಅದನ್ನ ಪದಗಳ ಸಾಲಾಗಿ
ಅದುವೇ ನನ್ನ ಕವನ..

ಎದೆಯಲಿ ಅರಳಿದೆ
ಚೆಲುವಿನ ತಾವರೆ
ಬರೆದೆ ಅದನ್ನ ಪದಗಳ ಸಾಲಾಗಿ
ಅದುವೇ ನನ್ನ ಕವನ..

ಹೃದಯವೇ ಬಯಸಿದೆ
ನಿನ್ನಯ ಪ್ರೀತಿಯು
ಬರೆದೆ ಅದನ್ನ ಪದಗಳ ಸಾಲಾಗಿ
ಅದುವೇ ನನ್ನ ಕವನ..

ನಯನದಿ ಕಂಡೆನು
ನಿನ್ನಯ ನೆನಪು
ಬರೆದೆ ಅದನ್ನ ಪದಗಳ ಸಾಲಾಗಿ
ಅದುವೇ ನನ್ನ ಕವನ..

ಜೀವವು ಬಯಸಿದೆ
ನಲ್ಮೆಯ ಆಸರೆ
ಬರೆದೆ ಅದನ್ನ ಪದಗಳ ಸಾಲಾಗಿ
ಅದುವೇ ನನ್ನ ಕವನ..!!

Sunday, July 11, 2010

ನಿನ್ನ ಪ್ರೀತಿಯೇ ಕಾರಣ ,,,

ಪ್ರೀತಿಗೆ ಕಾರಣ ಗೊತ್ತಿಲ್ಲ

ಕಾರಣವಿಟ್ಟು ಪ್ರೀತಿಸಿದರೆ ಅದು ಪ್ರೀತಿಯೇ ಅಲ್ಲ

ಪ್ರೀತಿಗೆ ಕಾರಣ ಬೇಕಿಲ್ಲ

ಆದರು ಪ್ರೀತಿಗೆ ಕಾರಣ

ಪ್ರೀತಿ ಮಾತ್ರ ...♥♥♥♥♥ ,


 
***written by my better half..

Thursday, May 20, 2010

you are the only one for me........♥♥♥

I was always alone in this world,
wanted to be loved,by someone.
I always had teary eyes,
wanted it to be wiped by someone.

Then you entered my life
brought hopes in my heart
you promised me holding my hands
we can never be apart.

Our love will grow, much stronger
our love will always shine
our love will be blessed always
our love is power of divine.

I want to live
every moment with you
I want to live
every life with you,

you mean so much to me
no one can love me
more than you.
I will give my whole life to you,

As I look at the stars at night
And dream of what is to be...
My heart begins to smile
For it's you I see

I think of you each day
my mind is set on you
You bring the best in me
with the sweet things you do.


In wet nights, taking you along
We get mesmerised, let's get closer
Come a little closer, touch me gently
I'll lose myself in your love, embrace me

I promise you, I'm just for you
Don't ever go away
promise me you will
always be the same.

No matter what destiny, brings for us.
You will always be my love.
Sweetheart, this love for you is true
And know forever I will Love You....♥♥♥

Saturday, April 10, 2010

ನಯನ ನೀನಾದರೆ..♥♥♥♥♥♥

ನಯನ ನೀನಾದರೆ , ಕಣ್ಣ ರೆಪ್ಪೆ ನಾನಾಗುವ ಆಸೆ
ಕೊನೆವರೆಗೂ ನಿನ್ನ ಜೊತೆಯಾಗಿರುವ ಆಸೆ..

ಸದಾ ನಿನ್ನ ಹೊಳೆಯುವ ಕಣ್ಣಗಳನೆ ನೋಡುವ ಆಸೆ
ಜಗವನೆಲ್ಲ ಮರೆತು ನಿನ್ನ ಸೇರುವ ಆಸೆ ..

ಕಣ್ಣರೆಪ್ಪೆಯಂತೆ ಸದಾ ನಿನ್ನ ಚುಂಬಿಸುವ ಆಸೆ
ಸದಾ ಬೆಚ್ಚಗೆ ನಿನ್ನ ಅಪ್ಪಿಕೊಳ್ಳುವ ಆಸೆ ..

ನವಿರಾದ ನಿನಗೆ ನೋವಾಗದಂತೆ ಕಾಪಾಡುವ ಆಸೆ
ರಾತ್ರಿ ಕನಸುಗಳಿಗೆ ಕಾವಲುಗಾರನಾಗುವ ಆಸೆ..

ಕೇಳು ಗೆಳತಿ , ನಯನ ನೀನಾದರೆ
ಇದುವೇ ನನ್ನ ಮನದ ಆಸೆ ..

Wednesday, March 10, 2010

You mean the world to me...!!!

I dreamt some time ago...
I fell in love with you somewhere...
You're my imagination...
You're my dream girl...
My heart said you're mine...

When some one asks me
the sweetest thing in my life...
The first thing that would strike my mind is your name...

When some one asks me
the happiest thing in my life...
It would be the path you go...

When some one asks me about
the sky's missing blue color..
I would tell them that it is in your eyes...

I'll curse myself
if i fail to express my feeling to you...

I'll praise myself
if you say what i want to say...

I'll be myself if you are with me,
else i will go mad...

you are my life,everything, You mean the world to me...!!

Friday, February 26, 2010

ಕಾದಿರುವೆ ನಿನಗಾಗಿ ..!!

ನಯನದಲಿ ಗರಿಗೆದರಿ
ಕುಣಿಯುವ ಕನಸುಗಳು
ಕಂದಿ ಕಮರುವ ಮುನ್ನ
ಬಂದು ಬಿಡು ಗೆಳತಿ

ಸಂಜೆಗೆಂಪಿನ ಕೆನ್ನೆಯ
ಚೆಲುವ ಕಿರು ಗುಳಿಯಲ್ಲಿ
ಸುಕ್ಕು ಮೂಡುವ ಮುನ್ನ
ಬಂದು ಬಿಡು ಗೆಳತಿ

ಹೃದಯದೊಲವಿನ ಜೋಗ
ಎದೆ ಹಸಿರ ಗಿರಿಯಿಂದ
ಬತ್ತಿ ಹೋಗುವ ಮುನ್ನ
ಬಂದು ಬಿಡು ಗೆಳತಿ

ಎದೆಯ ಅಂಗಳದಿ
ಪ್ರೀತಿ ಚಿತ್ತಾರದ ಹೂ
ಬಾಡಿ ಬೀಳುವ ಮುನ್ನ
ಬಂದು ಬಿಡು ಗೆಳತಿ.....

ಆಸೆ..!!

ಭಾವನೆಗಳ ಮಳೆಯಲ್ಲಿ
ನೆನಪುಗಳ ಹಂದರದಲ್ಲಿ
ಮನಸಿನ ಆಳದಲ್ಲಿ
ನೂರೊಂದು ನೆನಪುಗಳ ಸುಳಿಯಲ್ಲಿ
ಈ ಬದುಕಿನ ಹಾದಿಯಲ್ಲಿ
ನನ್ನ ಜೀವನದ ಅರ್ಥವ ಹುಡುಕುವ ಆಸೆ

ಹಕ್ಕಿಗಳ ಇಂಚರದಲ್ಲಿ
ಕೋಗಿಲೆಯ ಗಾನದಲ್ಲಿ
ನನ್ನ ಮನದ ದ್ವನಿಗಳ ಸೇರಿಸುವ ಆಸೆ

ಆಕಾಶದ ಆಚೆಯಲ್ಲಿ ಕಾಣುವ ನಕ್ಷತ್ರಗಳ ಮಿಂಚಲ್ಲಿ
ನನ್ನ ಕಣ್ಣುಗಳ ಬೆಳಕಿನ ಹೊಳಪಲ್ಲಿ
ಕಾಣುವ ಆಸೆಗಳ ಚಿಗುರು ಬಳ್ಳಿಯನು ಹರಡುವ ಆಸೆ..!!