ನಯನ ನೀನಾದರೆ , ಕಣ್ಣ ರೆಪ್ಪೆ ನಾನಾಗುವ ಆಸೆ
ಕೊನೆವರೆಗೂ ನಿನ್ನ ಜೊತೆಯಾಗಿರುವ ಆಸೆ..
ಸದಾ ನಿನ್ನ ಹೊಳೆಯುವ ಕಣ್ಣಗಳನೆ ನೋಡುವ ಆಸೆ
ಜಗವನೆಲ್ಲ ಮರೆತು ನಿನ್ನ ಸೇರುವ ಆಸೆ ..
ಕಣ್ಣರೆಪ್ಪೆಯಂತೆ ಸದಾ ನಿನ್ನ ಚುಂಬಿಸುವ ಆಸೆ
ಸದಾ ಬೆಚ್ಚಗೆ ನಿನ್ನ ಅಪ್ಪಿಕೊಳ್ಳುವ ಆಸೆ ..
ನವಿರಾದ ನಿನಗೆ ನೋವಾಗದಂತೆ ಕಾಪಾಡುವ ಆಸೆ
ರಾತ್ರಿ ಕನಸುಗಳಿಗೆ ಕಾವಲುಗಾರನಾಗುವ ಆಸೆ..
ಕೇಳು ಗೆಳತಿ , ನಯನ ನೀನಾದರೆ
ಇದುವೇ ನನ್ನ ಮನದ ಆಸೆ ..
No comments:
Post a Comment